ಎಲ್ಲ ಓಕೆ ..ಅಮೆರಿಕನ್ ಸ್ಟ್ಯಾಂಡರ್ಡ್ ಯಾಕೆ ?

ಏನಮ್ಮ ಏನು ಸಮಾಚಾರ ? ಹೇಗಿದಿಯಾ ? ಅಂತ ಮೂರು ವರುಷಗಳಾದ ಮೇಲೆ ರೋಡಲ್ಲಿ ಸಿಕ್ಕಿದ್ದ ಚಡ್ಡಿ ದೋಸ್ತ್ ರಮೇಶನಿಗೆ ನಾ ಕೇಳಿದಾಗ …”whats up Dude ? how you doing ?” ರಿಪ್ಲೈ ಬಂದಾಗ ಒಂದು ಕ್ಷಣ ತಬ್ಬಿಬ್ಬಾಗಿದ್ದೆ ! ನಾನು ಏನರ ನ್ಯೂ ಯಾರ್ಕ್ ಸಿಟಿನಲ್ಲಿ ಇದಿನೋ ಅಥವಾ ನಾ ಓದಿ ಬೆಳೆದ ನನ್ನ ಪ್ರೀತಿಯ ಬೆಂಗಳೂರಿನಲ್ಲಿ ಇದಿನೋ ಅಂತ ಒಮ್ಮೆಲೇ ಕನ್ಫ್ಯೂಸ್ ಆಗಿ , ನನ್ನ ಕೈ ನಾನೇ ಒಮ್ಮೆ ಚಿವುಟಿಕೊಂಡು ಅತ್ತಿತ್ತ ನೋಡಿದರೆ ಅದೇ ರಸ್ತೆ , ಅದೇ ಬಿಲ್ಡಿಂಗ್ ,ಅದೇ ಪರಿಚಿತ ದೋಸ್ತ್ ನ ಮುಖ ….hmmm .. I’m ಫೈನ್ ಅಂತಾ ತೊದಲಿದ್ದೆ. ಕಂ ಲೆಟ್ಸ್ have some ಕೂಲ್ ಡ್ರಿಂಕ್ಸ್ ಅಂತಾ ಅವ ಅಂದಾಗ..ನೆತ್ತಿಯ ಬೆಲೆ ಬಂದಿದ್ದ ಸೂರ್ಯನ ಪ್ರಖರತೆಗೆ ನಂಗೂ ಬಾಯಾರಿದ್ದರಿಂದ ನಡಿ ..ಅಂತ ಹೇಳಿ ಅಲ್ಲೇ ಕಣ್ಣಿಗೆ ಬಿದ್ದ ಹಿಮಸಾಗರ ಜೂಸ್ಸ್ ಸ್ಟಾಲಿಗೆ ನುಗ್ಗಿದ್ದೆವು.

 

ಮೂರು ವರುಷಗಳಾದ ಮೇಲೆ ರಜದ ಮೇಲೆ ಅಮೇರಿಕಾದಿಂದ ಬಂದಿದ್ದ ನಂಗೆ ಅಲ್ಲಿ ಕಂಡ ಫ್ರೆಶ್ ಕಬ್ಬಿನ ಹಾಲು ಕುಡಿಯಬೇಕೆನಿಸಿ ಆರ್ಡರ್ ಮಾಡಿದಾಗ , ಪಕ್ಕದಲ್ಲಿದ್ದ ರಮೇಶ ನನ್ನ ಒಮ್ಮೆ ಮೇಲಿಂದ ಕೆಳಗಿನ ತನಕ ಒಂತರಾ ನೋಡಿ , ಅವ ತನಗೆ ಕೋಲ್ಡ್ diet coke ಆರ್ಡರ್ ಮಾಡಿದ್ದ. ಏನೋ ನೀನು ? ಅಮೇರಿಕಾದಲ್ಲಿ ಇಷ್ಟು ವರ್ಷಗಳು ಇದ್ದರೂ ಏನೂ ಚೇಂಜ್ ಹಾಗೇ ಇಲ್ಲ ? strange ಅಂತ ಅಂದಾಗ, ನಂಗೇ ಒಂತರಾ strange ಫೀಲಿಂಗ್ ಆಗಿತ್ತು. 

ಸ್ವಲ್ಪ ಹೊತ್ತು ಅವನ ಜೊತೆ ಅದು ಇದು ಮಾತನಾಡಿ , ಇನ್ನೂ ಜೆಟ್ ಲಾಗ್ ಇದ್ದಿದ್ದರಿಂದಲೋ ಅಥವಾ ರಮೇಶನ ಬಲವಂತದ ಅಮೆರಿಕನ್ ಆಕ್ಸೆಂಟ್ ಇಂಗ್ಲೀಷಿನಿಂದಲೋ ಸ್ವಲ್ಪ ತಲೆನೋವು ಬಂದಂತಾಗಿ ಬೇಗನೆ ಮನೆಗೆ ಬಂದು ಮಲಗಿದ್ದೆ .

 

ಒಂದೆರಡು ದಿನ ಆರಾಮಾಗಿ ಮನೆಯಲ್ಲಿ ಅಪ್ಪ-ಅಮ್ಮ,ಅಣ್ಣರ ಜೊತೆ ಮಾತಾಡಿ ಒಳ್ಳೆ ಊಟ ಮಾಡಿ ಚೆನ್ನಾಗಿ ರೆಸ್ಟ್ ಆದಮೇಲೆ ಹೊರಗಡೆ ಅಡ್ಡಾಡತೊಡಗಿದ್ದೆ. 

ಮೊದಲೆರಡು ದಿನ ಅಣ್ಣನೇ ಕಾರ್ ಡ್ರೈವ್ ಮಾಡಿ ಅಲ್ಲಿ ಇಲ್ಲಿ ಅಡ್ಡಾಡಿಸಿದ್ದ. ಆಮೇಲೆ ಅವನಿಗೆ ಯಾಕೆ ಸುಮ್ಮನೆ ತೊಂದರೆ ಅಂದು ನಾನೇ ಹೋಗುತ್ತಿದ್ದೆ. ನಂಗೆ ಕಾರು ಓಡಿಸಲು ಭಯ ..ರೈಟ್ ಹ್ಯಾಂಡ್ ಡ್ರೈವ್ ಬೇರೆ .. ಅಮೇರಿಕಾದಲ್ಲಿ ಒಬ್ಬನೇ ಕುಳಿತು ಕಾರು ಓಡಿಸಿ ಓಡಿಸಿ ಬೋರು ಬೇರೆ ಆಗಿತ್ತು , ಅಲ್ಲದೆ ಮಗನಿಗೂ ಕಾರ್ ಸೀಟ್ ನಲ್ಲಿ ಬೆಲ್ಟ್ ಹಾಕಿ ಕೂತು ಕೂತು ಬೇಜಾರಾಗಿತ್ತು .. ಮೊದಲ ಬಾರಿಗೆ ಇಂಡಿಯಾಕ್ಕೆ ನನ್ನ ಜೊತೆ ಬಂದಿದ್ದ ಮಗನಿಗೆ ಊರನ್ನು ತೋರಿಸಿದ ಹಾಗೆ ಆಗುತ್ತೆ ಅಂತಾ ಬೈಕಲ್ಲಿ, ಆಟೋ ರಿಕ್ಷಾದಲ್ಲಿ , BTS ಬಸ್ಸಲ್ಲಿ ಸುತ್ತಾಡಿಸಿದ್ದೆ. ಅವನಿಗೂ ಏನೋ ಒಂತಾರ ಮಜಾ. 

 

ಬಸ್ಸಲ್ಲಿ, ಆಟೋದಲ್ಲಿ , ಟ್ರೈನಲ್ಲಿ ಓಡಾಡೋ ಮಜಾ , ಅನುಭವ ಕಾರಲ್ಲಿ ಒಬ್ಬರೇ ಕೂತು ಗ್ಲಾಸ್ ಕ್ಲೋಸ್ ಮಾಡಿಕೊಂಡು ಓಡಾಡೋದರಲ್ಲಿ ಸಿಗೋಲ್ಲ. ಅಮೇರಿಕಾದಲ್ಲಿ ನಮ್ಮೋರು ಅನ್ನೋರು ಮಾತಾಡಲು ಸಿಕ್ಕರೆ ಸಾಕು ಅಂತ ಹಂಬಲಿಸುತ್ತಿದ್ದ ನನಗೆ ಬಸ್ಸಲ್ಲಿ, ಆಟೋದಲ್ಲಿ , ಟ್ರೈನಲ್ಲಿ ಓಡಾಡುವಾಗ ಜನರೊಂದಿಗಿನ ಒಡನಾಟ , ಮಾತುಕತೆ , ಒಬ್ಬೊಬ್ಬರ ಒಂದಂದು ಕತೆ ಕೇಳಿ ಒಳ್ಳೆಯ ಅನುಭವದ ಜೊತೆಗೆ ಖುಷಿಯನ್ನೂ ನೀಡಿತ್ತು. 

 

ಒಂದು ದಿನ ಸಮೀಪದ ಸಂಬಂಧಿಕರ ಮನೆಯಿಂದ ಊಟಕ್ಕೆ ಬುಲಾವ್ ಬಂದಿತ್ತು. ಅಣ್ಣ ಬೇರೆ ಕೆಲಸದ ಮೇಲೆ ಎಲ್ಲೋ ಹೋಗಿದ್ದ. ಸರಿ ಹೇಗಿದ್ದರೂ ಅವರ ಮನೆ ಸ್ವಲ್ಪ ಹತ್ತಿರಾನೆ ಇದ್ದಿದ್ದರಿಂದ ಆಟೋ ರಿಕ್ಷಾದಲ್ಲೇ ಅವರ ಮನೆಗೆ ಮಗನನ್ನೂ ಊಟಕ್ಕೆ ಕರೆದೊಯ್ದಿದ್ದೆ. ಮಾತುಕತೆ ಎಲ್ಲ ಆದಮೇಲೆ ಊಟಕ್ಕೆ ರೆಡಿ ಮಾಡಿದ್ದರು. ಇಲ್ಲೇ ಒಂದು ಹೊಸದಾಗಿ ಓಪನ್ ಆದ ಫಾಸ್ಟ್ ಫುಡ್ ಸೆಂಟರ್ ನಲ್ಲಿ ತರಿಸಿದ್ದು ಎಂದು ರೋಟಿ, ನಾನ್, ಸಬ್ಜಿ ಬಡಿಸಿದ್ದರು. ಇಲ್ಲೂ ಅದನ್ನೇ ತಿಂದು ತಿಂದು ಸಾಕಾಗಿ, ಒಳ್ಳೆ ಕರ್ನಾಟಕ ಫುಡ್ ತಿನ್ನುವ ಆಸೆಯಿಂದ ಇದ್ದ ನಾನು ನಿಧಾನವಾಗಿ ಹೊಟ್ಟೆಗೆ ಸೇರಿಸಿದ್ದೆ. ಅಷ್ಟೊತ್ತಿಗೆ ಅವರ ಮಗನ ಜೊತೆ ನನ್ನ ಮಗನೂ ಚೆನ್ನಾಗಿ ಜೊತೆಗೊಂಡು ಇಬ್ಬರೂ ಆಡತೊಡಗಿದ್ದರು. ಏನಪ್ಪಾ ನಿನ್ನ ಹೆಸರು ? ಯಾವ ಸ್ಕೂಲ್? ಅಂತಾ ನಾ ಅವನನ್ನೂ ವಿಚಾರಿಸಿದಾಗ ಆ ಪುಟಾಣಿ ಚೆನ್ನಾಗಿ ಕನ್ನಡದಲ್ಲೇ ಉತ್ತರಿಸಿದ್ದ ಕಂಡು ಬಹಳ ಖುಷಿಯಾಗಿತ್ತು. ಹಾಗೆ ಅವನ ಹತ್ತಿರ ಅದು-ಇದು ಮಾತಾಡುತ್ತಿದ್ದಾಗ ಅವನನ್ನು ಒಳಗೆ ಕರೆದ ಅವರಮ್ಮ “ಹೇಳಿದ್ದಿಲ್ವ ನಿಂಗೆ ..ಅಮೆರಿಕನ್ ಇಂಗ್ಲಿಷ್ನಲ್ಲೇ ಮಾತಾಡಬೇಕಂತ..” ಅಂತಾ ಗದರಿದ್ದು ಚಿಕ್ಕದಾಗಿ ಕಿವಿಗೆ ಕೇಳಿಬಂದಿತ್ತು. ಪಾಪ …ಮುಖಚಿಕ್ಕದು ಮಾಡಿಕೊಂಡು ಹೊರಬಂದ ಆ ಪುಟಾಣಿ ಆಮೇಲೆ ಇಂಗ್ಲಿಷಲ್ಲೇ ಮಾತಾಡತೊಡಗಿತ್ತು ): 

ನೋಡಿ ರಾಜು ..ಇವನನ್ನು ಒಳ್ಳೆ ಸ್ಟ್ಯಾಂಡರ್ಡ್ ಇಂಗ್ಲಿಷ್ ಗೆ ಸೇರಿಸಿದ್ದೀನಿ, ದಿನಾ AC ಕಾರಲ್ಲೇ ಸ್ಕೂಲ್ಗೆ ಹೋಗ್ತಾನೆ , ಈ ಮನೆ ಲಾಸ್ಟ್ ಇಯರ್ ಖರೀದಿ ಮಾಡಿದ್ದು ಅಂತಾ ಎಲ್ಲ ವಿವರಣೆ ಕೊಟ್ಟಾಗ , ನಾ ಕೇಳಿದ್ದೆ ಇದೆಲ್ಲ ಹೇಗೆ ಸಾಧ್ಯವಾಯಿತು ಇಷ್ಟು ಬೇಗನೆ ?…. “ಸೀ..ಇದು ಎಲ್ಲ ಲೋನ್ , ಕ್ರೆಡಿಟ್ ಮಾಯ ..ರಾಜು ” ಅಂತಾ ಉತ್ತರ ಕೊಟ್ಟಿದ್ದರು ಭುಜ ಹಾರಿಸಿ ! ಆಗ ಒಂದು ಕ್ಷಣ ನನಗೆ ಅಮೆರಿಕಾದಲ್ಲಿನ ಕ್ರೆಡಿಟ್ , ಲೋನ್ , ಫೈನಾನ್ಸ್ recession , foreclosure ಸೈನ್ ಬೋರ್ಡ್ ಎಲ್ಲ ಹಾಗೆ ಪಟ ಪಟ ಅಂತ ಮೆದುಳಲ್ಲಿ ಹಾದು ಹೋಗಿದ್ದವು. 

ನೀ ಬೇಕಾದರೆ ನಮ್ಮ ಕಾರನ್ನೇ use ಮಾಡಿಕೊ ಇಲ್ಲಿರುವಾಗ …ಸುಮ್ಮನೆ ಯಾಕೆ ಆಟೋ , ಬಸ್ಸು ಅಂತಾ ಬಿಸಿಲಲ್ಲಿ ಅಡ್ಡಾಡುತ್ತಿಯಾ ? ಅಮೇರಿಕಾದಿಂದ ಬಂದಿದಿಯಾ ನೀನು ..ಸ್ವಲ್ಪ ಅಮೆರಿಕನ್ ಸ್ಟ್ಯಾಂಡರ್ಡ್ ಮೈಂಟೈನ್ ಮಾಡಬೇಕಪ್ಪ ಅಂತಾ ಬುದ್ದಿವಾದ ಹೇಳಿದಾಗ , ಚಿಕ್ಕಂದಿನಿಂದ ಅಪ್ಪ ಅಮ್ಮ ಹೇಳಿಕೊಟ್ಟಿದ್ದ “ಹಾಸಿಗೆ ಇದ್ದಷ್ಟು ಕಾಲು ಚಾಚ ಬೇಕು” ಅನ್ನೋ ಗಾದೆಗೆ ಅಂಟಿಕೊಂಡಿದ್ದ ನನಗೆ ಅವರಿಗೆ ಏನು ಹೇಳಬೇಕು ಅಂತ ಗೊತ್ತಾಗದೆ ಅಲ್ಲಿಂದ ಹೊರಟಿದ್ದೆ !

 

ಕಾಲಕ್ಕೆ ತಕ್ಕಂತೆ ಬದಲಾಗಬೇಕೋ ಅಥವಾ ಜನಕ್ಕೆ ತಕ್ಕಂತೆ ಬದಲಾಗಬೇಕೋ ಅಂತ ಒಂದೂ ತಿಳಿಯದೆ ನನ್ನ ರಜಾ ದಿನಗಳನ್ನು ಮುಗಿಸಿ ವಾಪಸು ಬಂದಿದ್ದೆ !

 

“ಅಮೆರಿಕಾದ ಬೇವು – ಅಮೆರಿಕಾದ ಮಾವು ತಿಂದು ಭಾರತೀಯರಾಗಿರಿ” ಅಂತ ಮೊನ್ನೆ ಉಗಾದಿಗೆ ನನ್ನ ಮಿತ್ರರೊಬ್ಬರು ಇಂಡಿಯಾದಿಂದ ಶುಭಾಶಯ ಕೋರಿದಾಗ .. ಇತ್ತೀಚಿಗೆ “ಇಂಡಿಯಾ ಬೇವು – ಇಂಡಿಯಾ ಮಾವು ತಿಂದು, ಅಲ್ಲೇ ಬಹಳಷ್ಟು ಜನ ಅಮೆರಿಕಾದವರಾಗಿದ್ದಾರೆ” ಅಂತ ಅವರಿಗೆ ಹೇಳಿದಾಗ ..ಹೌದು ..ನೀನು ಹೇಳೋದು ಸತ್ಯ ಬಿಡು ಗುರು , ಅಂತ ಅಂದಿದ್ದ ನನ್ನ ಮಿತ್ರ! 

 

ಎಲ್ಲ ದೇಶದಲ್ಲೂ ಒಳ್ಳೆಯದು , ಕೆಟ್ಟದ್ದು ಇದ್ದೇ ಇರುತ್ತೆ ..ಒಳ್ಳೆಯದನ್ನು ಕಲಿತು, ನಮ್ಮತನವನ್ನೂ ಉಳಿಸಿಕೊಂಡು.. ಹಾಸಿಗೆ ಇದ್ದಷ್ಟು ಕಾಲು ಚಾಚಿ ಜೀವನ ಮಾಡಿದರೆ ಸ್ವರ್ಗ ಸುಖ ಅಂತ ನನ್ನ ಅನಿಸಿಕೆ …ನೀವೇನು ಅಂತಿರಾ ? 

 

-ನಾಗರಾಜ್. ಎಂ, Written by Nagaraja Maheshwarappa

Advertisements

Leave a comment

Filed under Uncategorized

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s