ನಮ್ಮ ಮಕ್ಕಳು ಏಕೆ ಕನ್ನಡ ಕಲಿಯಬೇಕು

ನಾವು ಕನ್ನಡಿಗರು, ನಮ್ಮ ತಾಯ್ನಾಡು ಕರ್ನಾಟಕ, ಮತ್ತು ನಮ್ಮ ತಾಯ್ನುಡಿ  ಕನ್ನಡ.

ಕನ್ನಡ ಕೂಟ ನ್ಯೂಯಾರ್ಕ್ ಸಂಘದ ಆಶ್ರಯದಲ್ಲಿ  ನಲವತ್ತು ವರ್ಷಗಳಿಂದ ಕನ್ನಡಿಗರು ಒಟ್ಟಾಗಿ ಬಹಳ ಸಂಭ್ರಮದಿಂದ ಅನೇಕ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬಂದಿದ್ದಾರೆ.  ಹಿರಿಯರು, ಕಿರಿಯರು, ಯುವಕ-ಯುವತಿಯರು ಅತ್ಯಾಸಕ್ತಿಯಿಂದ ಭಾಗವಹಿಸಿತ್ತಾ ಇದ್ದಾರೆ.

ನಾವೆಲ್ಲರೂ ಹೆಚ್ಚಿನ ಸಂಭ್ರಮದಿಂದ ಕೂಟದ ರತ್ನ ಮಹೋತ್ಸವವನ್ನು ಆಚರಿಸುತ್ತಿದ್ದೇವ.

ನಾವೆಲ್ಲರೂ ನಮ್ಮ ತವರೂರಾದ ಕರ್ನಾಟಕದಿಂದ ಬಹುದೂರ ಬಂದು ಅಮೆರಿಕದಲ್ಲಿ  ನೆಲೆಸಿದ್ದೇವೆ.  ಆದರೆ ತಾಯ್ನಾಡನ್ನು ಮರೆತಿಲ್ಲ.  ಹೆತ್ತ  ತಂದೆ-ತಾಯಿಗಳನ್ನು ಹೇಗೆ ಮರೆಯುವುದಿಲ್ಲವೋ ಹಾಗೇ

ತಾಯ್ನಾಡನ್ನೂ, ತಾಯ್ನುಡಿಯನ್ನೂ ಮರೆಯಬಾರದು.

ಸಿರಿಗನ್ನಡ ನಾಡು, ಚೆಲುವಿನ ನಾಡು, ಗಂಧದ ಬೀಡು, ಮತ್ತು ಅನೇಕ ಕಲೆಗಳ ಆಗರ.  ಪ್ರಕೃತಿ ಸೌಂದರ್ಯದ ನೆಲೆವೀಡು.

ಕರ್ನಾಟಕ ಕಾವೇರಿಯಿಂದ ಗೋದಾವರಿಯವರೆಗೂ ಹಿಂದೆ ಹಬ್ಬಿತ್ತು ಎಂದು ಒಂಭತ್ತನೆಯ ಶತಮಾನದಲ್ಲಿ ರಚಿತವಾದ “ಕವಿರಾಜಮಾರ್ಗ” ಕಾವ್ಯದಲ್ಲಿ ಹೇಳಿದೆ.

ಕನ್ನಡ ಸಂಸ್ಕೃತಿ ಬಹಳ ಹಳೆಯದು.  ಅದನ್ನು ಉಳಿಸಿಕೊಳ್ಳುವುದು ಕನ್ನಡಿಗರಾದ ನಮ್ಮ ಕರ್ತವ್ಯ.

ಈಗ ನಮ್ಮೆಲ್ಲರ ಮುಂದೆ ಇರುವ ಪ್ರಶ್ನೆ ಏನೆಂದರೆ ನಾವು ಮತ್ತು ನಮ್ಮ ಮುಂದಿನ ಪೀಳಿಗೆ  ಕನ್ನಡತನವನ್ನು ಉಳಿಸಿಕೊಳ್ಳುವುದು ಹೇಗೆ?  

ಕನ್ನಡತನವೆಂದರೆ ಏನು?

ಕನ್ನಡ ಭಾಷೆಯನ್ನು ನಮ್ಮಲ್ಲಿ  ಉಳಿಸಿಕೊಳ್ಳವುದು.

ಹೇಗೆಂದರೆ, ಮನೆಯಲ್ಲಿ ಆದಷ್ಟು ಕನ್ನಡದಲ್ಲಿ ಮಾತನಾಡಬೇಕು

ಇಲ್ಲೇ ಹುಟ್ಟಿ ಬೆಳೆದ ಮಕ್ಕಳಿಗೆ ಮಾತನಾಡಲು, ಓದಲು, ಮತ್ತು ಬರೆಯಲು ಕಲಿಸುವ ಪ್ರಯತ್ನ ಮಾಡಬೇಕು.

ಮಕ್ಕಳಿಗೆ ಕನ್ನಡ ಕಲಿಯುವುದರಿಂದ ಆಗುವ ಪ್ರಯೋಜನಗಳನ್ನು ಮನಕ್ಕೆ ಮುಟ್ಟುವಂತೆ ತಿಳಿಸಿಕೊಡಬೇಕು.  ಇಲ್ಲೇ ಹುಟ್ಟಿಬೆಳೆದ ಮಕ್ಕಳು ಕನ್ನಡ ಓದಲು-ಬರೆಯಲು ಕಲಿಯುವುದರಿಂದ ಆಗುವ ಪ್ರಯೋಜನಗಳು: ೧.  ಊರಿಗೆಹೋದಾಗ ಅಜ್ಜ-ಅಜ್ಜಿ ಮತ್ತು ಹಿರಿಯರೊಂದಿಗೆ ಮಾತನಾಡಬಹುದು,  ೨.  ಇತರರು ಆಡಿದ ಮಾತನ್ನು ಅರ್ಥಮಾಡಿಕೊಳ್ಳಬಹುದು,  ೩.  ಪತ್ರವ್ಯವಹಾರ ನಡೆಸಬಹುದು, ೪.  ಊರಿಗೆಹೋದಾಗ ಅಂಗಡಿಗಳಲ್ಲಿ ವ್ಯಾಪರಮಾಡಬಹುದು,  ೫.  ಫಲಕಗಳನ್ನು ಓದಬಹುದು, ೬.  ಎಲ್ಲದಿಕಿಂತ ಹೆಚ್ಚಾಗಿ ಎಲ್ಲರ ಜೊತೆಯಲ್ಲಿ ಸಂಕೋಚವಿಲ್ಲದೇ ಧಾರಾಳವಾಗಿ ವ್ಯವಹರಿಸಬಹುದು.  

ಕನ್ನಡ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೂ ಭಾಷೆ ಬೇಕು.  

ಹಿರಿಯರು ಮತ್ತು ಯುವಕರು ಮಕ್ಕಳಿಗೆ ಹೆಚ್ಚು ಪ್ರೊತ್ಸಾಹ ಉತ್ತೇಜನ ಕೊಟ್ಟು ಈದೆಸೆಯಲ್ಲಿ ಮಾರ್ಗದರ್ಶನ ಮಾಡಬೇಕು.

ನಮ್ಮ ಮಕ್ಕಳಿಗೆ ಕನ್ನಡ ಕಲಿಸೋಣ.

ಜೈ ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ

—ಶಾಂತಶ್ರೀ, Submitted by Shantha Murthy

 

Advertisements

Leave a comment

Filed under Uncategorized

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s